"ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು" ೧೯೯೦ರಲ್ಲಿ ಪ್ರಕಟವಾದ ಲೇಖಕ ಪಿ.ಲಂಕೇಶ್‌ ಅವರ ಕಥಾ ಸಂಕಲನ. == ವಿವರ == ಈ ಕಥಾ ಸಂಕಲನದ ಪ್ರಥಮ ಮುದ್ರಣದಲ್ಲಿ ಹದಿಮೂರು ಸ್ವರಚಿತ ಕತೆಗಳು ಜೊತೆಗೆ ಮೂರು ಇತರರ ಕಥೆಗಳು ಇವೆ. ಎರಡನೇ ಮುದ್ರಣದಲ್ಲಿ "ದಾಳಿ" ಎಂಬ ಕಥೆಯನ್ನು ಸೇರಿಸಲಾಗಿದೆ. == ಕಥಾ ಸಂಕಲನದಲ್ಲಿ ಇರುವ ಕಥೆಗಳು == ದಾಹ ಕೃತಜ್ಞತೆ ಒಂದು ಬಾಗಿಲು ಕಣ್ಮರೆ ಮುಟ್ಟಿಸಿಕೊಂಡವನು ಸಹಪಾಠಿ ಉರಿದ ಊರಿನವರು ವೃಕ್ಷದ ವೃತ್ತಿ ತೋಟದವರು ಕಲ್ಲು ಕರಗುವ ಸಮಯ ಸ್ಟೆಲ್ಲಾ ಎಂಬ ಹುಡುಗಿ ದೇವಿ ಸುಭದ್ರ ಈ ಸಂಕಲನದಲ್ಲಿ ಮೃಗ ಮತ್ತು ಸುಂದರಿ, ಟಾಲ್ ಸ್ಟಾಯ್ ,ಅಧಿಕಾರಿಗಳು ಮತ್ತು ಕೆಲಸದವರು ಇತರರು ಬರೆದ ಕಥೆಯ ಸಂಗ್ರಹವಾಗಿದೆ. ಲಂಕೇಶ್ ಅವರೇ ಬರೆದ "ದಾಳಿ" ಕಥೆಯು ಎರಡನೇ ಮುದ್ರಣದಲ್ಲಿ ಸೇರ್ಪಡೆಗೊಂಡಿತು. == ಪ್ರಶಸ್ತಿಗಳು == ೧೯೯೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಸಂಕಲನಕ್ಕೆ ಸಂದಿತು. == ಉಲ್ಲೇಖಗಳು ==